M.net4.jpeg
  • ಕವರ್ ಸ್ಟೋರಿ

  • ಸ್ಟೇಟ್ ನ್ಯೂಸ್

  • ದೇಶ - ವಿದೇಶ

  • ಸಿಟಿಜನ್ ರಿಪೋರ್ಟರ್

  • ಅಂಕಣಗಳು

  • ಕಥನ ಕುತೂಹಲ

  • More

    • Facebook Social Icon
    • Twitter Social Icon
    • Google+ Social Icon
    • YouTube Social  Icon
    • Pinterest Social Icon
    • Instagram Social Icon
    RSS Feed
    ಅಂಕಣಗಳು

    ಅಜಿಲಮೊಗರು: ಸೂಫಿ ಸಂತನ ನಾಡು ಹಾಗೂ ಕೂಡುಬಾಳುವಿಕೆಯ ಪರಂಪರೆ

    March 5, 2018

    ಇಂತಹ ಸಣ್ಣ ಪುಟ್ಟ ಸಂಗತಿಗಳಿಂದ ಎರಡೂ ಧರ್ಮಗಳ ನಡುವೆ ಸೌಹಾರ್ದ ನೆಲೆಯೂರುತ್ತಾ ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಾರೆ. ಇವುಗಳು ಸೌಹಾರ್ದವೇ ಅಲ್ಲ ಎಂಬ ವಾದವನ್ನೂ ಹಲವರು ಮಾಡುತ್ತಾರೆ. ಇಂತಹಾ ವಾದಗಳ ಕಾರಣಗಳಿಂದಾಗಿಯೇ ಜನರ ನಡುವಿನ ಮತೀಯ ಸಾಂಸ್ಕೃತಿಕ ವಿನಿಮಯ ನಾಶವಾಗುತ್ತ ಬರುತ್ತಿದೆ. ಈ ರೀತಿಯ ಸಾಂಸ್ಕೃತಿಕ ವಿನಿಮಯದ ಮೂಲಕ ಎರಡೂ ಧರ್ಮಗಳ ಜನರನ್ನು ಒಂದುಗೂಡಿಸುವ ಕಾರ್ಯವನ್ನು ಕರಾವಳಿ ಭಾಗಗಳಲ್ಲಿ ಸೂಫಿ ಸಂತರ ದರ್ಗಾಗಳು ಹಾಗೂ ಭೂತ ಕೋಲದಂತಹ ಆಚರಣೆಗಳು ಮಾಡುತ್ತಲೇ ಇವೆ.

    ~ ಇರ್ಷಾದ್ ಉಪ್ಪಿನಂಗಡಿ 

    ದಕ್ಷಿಣ ಕನ್ನಡ ಕೋಮುವಾದಿ ಹಾಗೂ ಮೂಲಭೂತವಾದಿಗಳ ಪ್ರಯೋಗ ಶಾಲೆ ಎಂದು ಕರೆಯಲ್ಪಡುವ ಜಿಲ್ಲೆ. ಧರ್ಮ, ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ  ಜನಸಮಾನ್ಯರ ಮನಸ್ಸುಗಳನ್ನು ಒಡೆಯುವ ಕಾರ್ಯ ವ್ಯವಸ್ಥಿತವಾಗಿ ಇಲ್ಲಿ ನಡೆಯುತ್ತಾ ಬಂದಿದೆ. ಹಿಂದೂ, ಮುಸ್ಲಿಂ ಕೋಮುವಾದಿ ಹಾಗೂ ಮೂಲಭೂತವಾದಿ ಸಂಘಟನೆಗಳು ತಳಮಟ್ಟದಲ್ಲೇ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಇದರ ಪರಿಣಾಮ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಇದ್ದ ಮತೀಯ ಸೌಹಾರ್ದತೆ ಹಾಗೂ ಕೂಡುಬಾಳುವಿಕೆಯ ವಾತಾವರಣ ತೀವ್ರ ಸ್ವರೂಪದ  ಬದಲಾವಣೆಯನ್ನು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಣಸಿಗುವ ಸೌಹಾರ್ದತೆ ಹಾಗೂ ಮತೀಯ ಸಾಮರಸ್ಯದ ನಿದರ್ಶನಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಇದಕ್ಕೆ ಒಂದು ಉದಾಹರಣೆಯಾಗಿದೆ ಬಂಟ್ವಾಳ ತಾಲೂಕಿನ ಅಜಿಲಮೊಗರು ಸೂಫಿ ಸಂತ ಬಾಬಾ ಫಖ್ರುದ್ದೀನ್ ದರ್ಗಾ.

    ಈ ಗ್ರಾಮ ಹಾಗೂ ಇಲ್ಲಿ ಮತೀಯ ಸೌಹಾರ್ದತೆಯ ಕುರಿತಾಗಿ ಹೇಳುವ ಮೊದಲು ಬಾಬಾ ಫಖ್ರುದ್ದೀನ್ ಕುರಿತಾಗಿ ಒಂದಿಷ್ಟು ವಿವರ ನೀಡಲೇಬೇಕಾಗುತ್ತದೆ. 

    ಬಾಬಾ ಫಖ್ರುದ್ದೀನ್ ಮೂಲತಃ ಇರಾನ್ ಸೇರಿರುವ ಸಿಸ್ತಾನದದವರು. ತಮ್ಮ ದೇಶ ಸಂಚಾರದ ಭಾಗವಾಗಿ ಹಾಗೂ ಧರ್ಮ ಪ್ರಚಾರದ ಉದ್ದೇಶವಾಗಿ ಇವರು ಅಜಿಲಮೊಗರೆಂಬ ಈ ಗ್ರಾಮಕ್ಕೂ ಭೇಟಿ ನೀಡಿ ಒಂದಿಷ್ಟು ಕಾಲ ನೆಲೆವೂರಿದ್ದರು ಎನ್ನಲಾಗಿದೆ. ಇವರ ಪವಾಡಗಳನ್ನು ಕಂಡು ಅಜಿಲ ಎಂಬ ಜಮೀನ್ದಾರಿ ಮನೆತನದವರು ಈ ಊರಲ್ಲಿ ಮಸೀದಿ ನಿರ್ಮಾಣ ಮಾಡಲು ಜಮೀನು ದಾನ ಮಾಡಿದರಂತೆ. ಬಳಿಕ ಬಾಬಾ ಫಖ್ರುದ್ದೀನ್ ತಮ್ಮ ಶಿಷ್ಯ ಝಕರಿಯ್ಯ ಎಂಬುವವರನ್ನು ಮಸೀದಿಯ ಮುಖ್ಯಸ್ಥರಾಗಿ ನೇಮಿಸಿ ತಮ್ಮ ದೇಶ ಸಂಚಾರವನ್ನು ಮುಂದುವರಿಸಿದರು ಎಂಬುವುದು ಇಲ್ಲಿಯ ಜನರ ನಂಬಿಕೆ.

    ಈ ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷವೂ ಇಲ್ಲಿಯ ಸೂಫಿ ಸಂತರ ನೆನಪಿನಲ್ಲಿ ಉರೂಸ್ ಆಚರಣೆ ಮಾಡಲಾಗುತ್ತದೆ. ಇಲ್ಲಿಯ ಉರೂಸ್ ಆಚರಣೆಯಲ್ಲಿ ‘‘ಮಾಲಿದ’’ ಎಂಬ ಸಿಹಿಯಾದ ತಿಂಡಿಯನ್ನು  ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ‘‘ಮಾಲಿದ’’ ಎಂದರೆ ಅಕ್ಕಿಯಿಂದ ಮಾಡಿದ ದಪ್ಪದ ರೊಟ್ಟಿಗೆ ತುಪ್ಪ ಹಾಗೂ ಬೆಲ್ಲ ಹಾಕಿ ಬಾಣಲೆಯಲ್ಲಿ ಬಿಸಿ ಮಾಡಿ ನಂತರ ಪುಡಿ ಮಾಡಿದ ಒಂದು ಬಗೆಯ ತಿಂಡಿ. ಊರೂಸ್ ಜಾತ್ರೆಯ ಸಂದರ್ಭದಲ್ಲಿ ಪ್ರತಿ ಮನೆಯಲ್ಲೂ ಈ ತಿಂಡಿಯನ್ನು ತಯಾರಿಸಲಾಗುತ್ತದೆ. ಮನೆಯಲ್ಲಿ ತಯಾರು ಮಾಡಿದ ‘‘ಮಾಲಿದ’’ ತಿಂಡಿಯನ್ನು ದರ್ಗಾಕ್ಕೆ ಹರಕೆ ರೂಪದಲ್ಲಿ ಸಲ್ಲಿಸಲಾಗುತ್ತದೆ. ಬಳಿಕ ಉರೂಸ್ ಜಾತ್ರೆಯ ಮೂರನೇ ದಿನ ಈ ತಿಂಡಿಯನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತದೆ. 

     

    ಅಜಿಲಮೊಗರು ಎಂಬ ಸೂಫಿ ಸಂತರ ಈ ಕ್ಷೇತ್ರ ಮಹತ್ವ ಪಡೆಯುವುದು ಇಲ್ಲಿಯ ಸಾಂಸ್ಕೃತಿಕ ವಿನಿಮಯ ಹಾಗೂ ಸೌಹಾರ್ದತೆಯ ವಾತಾವರಣದಿಂದಾಗಿ. ಅಜಿಲಮೊಗರು ಗ್ರಾಮ ಸುಂದರ ಪ್ರಾಕೃತಿಕ ಸೌಂದರ್ಯ ಹೊಂದಿದೆ. ಈ ಊರಲ್ಲಿ ನೇತ್ರಾವತಿ ನದಿ ಹರಿಯುತ್ತದೆ. ನದಿಯ ಒಂದು ದಡದಲ್ಲಿ ಅಜಿಲಮೊಗರು ಬಾಬಾ ಫಖ್ರುದ್ದೀನ್ ದರ್ಗಾ ಇದ್ದರೆ, ಮತ್ತೊಂದು ದಡದಲ್ಲಿ ಕಡೇ ಶಿವಾಲಯದ  ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಈ ಊರಿನ ಎರಡೂ ಧರ್ಮದ ಜನರ ನಡುವೆ ಈ ಕ್ಷೇತ್ರಗಳು ಸೌಹಾರ್ದದ ಕೊಂಡಿಯೆಂಬಂತಿವೆ. ಈ ಊರಲ್ಲಿ ಧರ್ಮ ಮೀರಿದ ಸೌಹಾರ್ದ ಪರಂಪರೆಗೆ ಹಲವಾರು ಉದಾಹರಣೆಗಳು ಕಾಣಸಿಗುತ್ತವೆ. ಅಜಿಲಮೊಗರು ದರ್ಗಾದ ಉರೂಸ್ ಸಮಾರಂಭಕ್ಕೆ ಊರ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇವರನ್ನು ದರ್ಗಾದಲ್ಲಿ ಗೌರವಯುತವಾಗಿ ನೋಡಿಕೊಳ್ಳಲಾಗುತ್ತದೆ.

     

    ಇಲ್ಲಿನ ಐತಿಹಾಸಿಕ ಪರಂಪರೆಯ ಕುರಿತಾಗಿ ಊರ ಹಿರಿಯರಲ್ಲಿ ಮಾತನಾಡಿದಾಗ,  ಗ್ರಾಮದ ಹಿಂದೂ ಮುಸ್ಲಿಮರ ನಡುವಿನ ಕೊಡುಕೊಳ್ಳುವಿಕೆಯ ಕುರಿತಾಗಿ ಅಭಿಮಾನದಿಂದ ಹಲವು ವಿಚಾರಗಳನ್ನು ಅವರು ನಮ್ಮಲ್ಲಿ ಹಂಚಿಕೊಂಡರು. ಅಜಿಲಮೊಗರು ದರ್ಗಾಕ್ಕೆ ಸ್ಥಳೀಯ ಹಿಂದೂಗಳು ತಾವು ಬೆಳೆದ ಕೃಷಿಯ ಮೊದಲ ಬೆಳೆಯನ್ನು ಹರಕೆ ರೂಪದಲ್ಲಿ ಸಲ್ಲಿಸುವ ಪರಿಪಾಠವನ್ನು ಇಟ್ಟುಕೊಂಡಿದ್ದರಂತೆ. ಈ ಮೂಲಕ ಮತ್ತೊಂದು ಧರ್ಮದ ಸೂಫಿ ಸಂತನ ದರ್ಗಾಕ್ಕೆ ಗೌರವವನ್ನು ಸಲ್ಲಿಸುತ್ತಿದ್ದರು. ಅದರ ಜೊತೆಗೆ ದರ್ಗಾದ ಊರೂಸ್ ಸಮಾರಂಭಕ್ಕೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವತಿಯಿಂದ ತುಪ್ಪ ಹಾಗೂ ಬೆಲ್ಲವನ್ನು ಕಾಣಿಕೆ ರೂಪದಲ್ಲಿ ಸಮರ್ಪಿಸುತ್ತಿದ್ದರಂತೆ. ಇದಕ್ಕೆ ಪ್ರತಿಯಾಗಿ ಮುಸ್ಲಿಮರ ಕಡೆಯಿಂದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಜಾತ್ರಾಮಹೋತ್ಸವಕ್ಕೆ ದೀಪದೆಣ್ಣೆ ಸಮರ್ಪಣೆಯಾಗುತಿತ್ತು. ಊರ ಹಿರಿಯರು ಹೇಳುವ ಪ್ರಕಾರ ಪ್ರತಿ ವರ್ಷ ಕಡೇ ಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಜಾತ್ರಾ ರಥೋತ್ಸವದದಲ್ಲಿ ಹಲವು ವರ್ಷಗಳ ಹಿಂದೆ ಬೊಟ್ಟು ಶೇಕ್ ಬ್ಯಾರಿ, ಗುಂಮ್ಮೋಡಿ ಬ್ಯಾರಿ, ಐಕುಳ ಅಚ್ಚ ಬ್ಯಾರಿ ಎಂಬ ಗ್ರಾಮದ ಹಿರಿಯ ಗೌರವಾನ್ವಿತ ಮುಸ್ಲಿಮರ ಹೆಸರನ್ನು ಕೂಗಿ ಕರೆಯುವ ಪದ್ದತಿಯೂ ಇತ್ತಂತೆ. 

     

    ಈ ರೀತಿಯ ಕೂಡಿಬಾಳುವಿಕೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ಧರ್ಮ ಸಂಸ್ಕೃತಿಯ ಕುರಿತಾಗಿ ಜನರಲ್ಲಿ ಶ್ರೇಷ್ಠ್ರತಾ ವ್ಯಸನ ಹೆಚ್ಚಾಗುತ್ತಿದ್ದಂತೆ ಮತ ಸೌಹಾರ್ದದ ವಾತಾವರಣಕ್ಕೆ ತಿಲಾಂಜಲಿ ಹಾಡುತ್ತಾ ಬರಲಾಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ. ಈ ನಡುವೆ,  ಬದಲಾವಣೆಯ ಈ ಸಂದರ್ಭದಲ್ಲೂ  ಸೌಹಾರ್ದ ಪರಂಪರೆ  ಸ್ವಲ್ಪ ಪ್ರಮಾಣದಲ್ಲಾದರೂ ಇಂದಿಗೂ ಊರಲ್ಲಿ ಕಾಣಸಿಗುತ್ತದೆ.  ಊರಲ್ಲಿ ಮುಗೇರು ದೈವಸ್ಥಾನದ ಧರ್ಮನೇಮ ಪ್ರತಿವರ್ಷ ನಡೆಯುತ್ತದೆ. ಮುಗೇರಿನಿಂದ ನಡು ಮುಗೇರು ಗುತ್ತಿಗೆ ದೈವದ  ಬಂಡಾರ ಹೋಗುವ ವೇಳೆ  ಮಸೀದಿ ಸಮೀಪವಾಗುವಾಗ ಬಂಡಾರ ಸಾಗುವ ಮೆರವಣಿಗೆಯಲ್ಲಿ  ಬ್ಯಾಂಡ್ ವಾದ್ಯಗಳನ್ನು ನಿಲ್ಲಿಸಿ ಗೌರವ ಸೂಚಿಸಲಾಗುತ್ತದೆ. ಜೊತೆಗೆ ಬಂಡಾರ ಹೋಗುವ ವೇಳೆ ದರ್ಗಾಕ್ಕೆ ಬಂದು ದೀಪವನ್ನು ಹಚ್ಚಿ ಮುಂದೆ ಸಾಗುತ್ತಾರೆ. ಈ ದೈವೋತ್ಸವ ಮುಗಿಯುವವರೆಗೂ ದರ್ಗಾದಲ್ಲಿ ಹಚ್ಚಿದ ದೀಪ ನಂದಬಾರದು ಎಂಬುವುದು ಸ್ಥಳೀಯರ ನಂಬಿಕೆ. ಸೂಫಿ ಸಂತರ ಈ  ದರ್ಗಾದಲ್ಲಿ  ಸಂಪ್ರದಾಯವಾಗಿ ಹರಕೆ ರೂಪದಲ್ಲಿ ವಿವಿಧ ರೂಪಗಳನ್ನು ಹೊಂದಿರುವ ಬೆಳ್ಳಿಯ ತಗಡು ಆಕೃತಿಗಳನ್ನು ಸಲ್ಲಿಸುವ ಪದ್ದತಿ ಇದೆ. ಈ ಹರಕೆಯ ವಸ್ತುಗಳನ್ನು ಮಾರುವ ಜನರು ಹಿಂದೂಗಳು. ಇದನ್ನು ಎರಡೂ ಧರ್ಮದ ಜನರು ಖರೀದಿ ಮಾಡಿ ತಮ್ಮ ಹರಕೆಯನ್ನು ದರ್ಗಾಕ್ಕೆ ಸಲ್ಲಿಸುತ್ತಾರೆ. 

    ಇಂತಹ ಸಣ್ಣ ಪುಟ್ಟ ಸಂಗತಿಗಳಿಂದ ಎರಡೂ ಧರ್ಮಗಳ ನಡುವೆ ಸೌಹಾರ್ದ ನೆಲೆಯೂರುತ್ತಾ ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಾರೆ. ಇವುಗಳು ಸೌಹಾರ್ದವೇ ಅಲ್ಲ ಎಂಬ ವಾದವನ್ನೂ ಹಲವರು ಮಾಡುತ್ತಾರೆ. ಇಂತಹಾ ವಾದಗಳ ಕಾರಣಗಳಿಂದಾಗಿಯೇ ಜನರ ನಡುವಿನ ಮತೀಯ ಸಾಂಸ್ಕೃತಿಕ ವಿನಿಮಯ ನಾಶವಾಗುತ್ತ ಬರುತ್ತಿದೆ. ಈ ರೀತಿಯ ಸಾಂಸ್ಕೃತಿಕ ವಿನಿಮಯದ ಮೂಲಕ ಎರಡೂ ಧರ್ಮಗಳ ಜನರನ್ನು ಒಂದುಗೂಡಿಸುವ ಕಾರ್ಯವನ್ನು ಕರಾವಳಿ ಭಾಗಗಳಲ್ಲಿ ಸೂಫಿ ಸಂತರ ದರ್ಗಾಗಳು ಹಾಗೂ ಭೂತ ಕೋಲದಂತಹ ಆಚರಣೆಗಳು ಮಾಡುತ್ತಲೇ ಇವೆ. 

     ಆದರೆ ಬೇರೂರುತ್ತಿರುವ ಕೋಮುವಾದ ಹಾಗೂ ಮೂಲಭೂತವಾದ ಇಂತಹಾ ಆಚರಣೆಗಳಿಂದ ತಮ್ಮ ತಮ್ಮ ಜನರನ್ನು ದೂರಮಾಡುವ ಕೆಲಸದಲ್ಲಿ ನಿರತವಾಗಿವೆ. ಇಂದು ಸೂಫಿ ಸಂತರ ದರ್ಗಾಗಳು ಹಾಗೂ ಅವರ ಉರೂಸ್ ಗಳು ಶಿರ್ಕ್ (ಧರ್ಮ ನಿಷಿದ್ಧ) ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಿವೆ. ಹಿಂದೂಗಳು ದರ್ಗಾಕ್ಕೆ ಬಂದು ಪ್ರಾರ್ಥನೆ ಸಲ್ಲಿಸುವುದು ಹಾಗೂ ಮುಸ್ಲಿಂಮರು ಹಿಂದೂಗಳ ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುವುದು ಧರ್ಮ ಬಾಹಿರ ಎಂಬ ವಾದಗಳು ಮುಸ್ಲಿಂ ಸಮಾಜದ ಜನರ ನಡುವೆ ಪ್ರಾಮುಖ್ಯತೆ ಪಡೆದುಕೊಳ್ಳತೊಡಗಿವೆ. ಅದರಂತೆ ಹಿಂದೂ ಕೋಮುವಾದಿಗಳ ತೆಕ್ಕೆಗೆ ಸಿಕ್ಕ ದೇವಸ್ಥಾನಗಳ ಜಾತ್ರಾ ಮಹೋತ್ಸವಗಳಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ಇಲ್ಲ ಎಂಬ ಬ್ಯಾನರ್ ಗಳೂ ಗೋಚರಿಸುತ್ತಿವೆ. ಇಂತಹ ವಾತಾವರಣದಲ್ಲಿ ಧರ್ಮಗಳ ಜನರ ನಡುವೆ ಭಾಂಧವ್ಯ ಬೆಸಯುವ ಅಗತ್ಯವಿದೆ. ಎರಡೂ ಧರ್ಮಗಳ ಜಾತ್ರೆ ಹಾಗೂ ಉರೂಸ್ ಗಳಲ್ಲಿ ಪರಸ್ಪರ  ಸಾಂಸ್ಕೃತಿಕ ವಿನಿಮಯ ಆದರೆ ಮಾತ್ರ ಜನರ ನಡುವಿನ ಧಾರ್ಮಿಕ ಕಂದಕ ದೂರವಾಗಲು ಸಾಧ್ಯ. ಜೊತೆಗೆ ಮತ್ತೊಂದು ಧರ್ಮದ ಹಾಗೂ ಅದರ ಸಂಸ್ಕೃತಿ ಆಚಾರ ವಿಚಾರಗಳ ಕುರಿತಾಗಿ ತಿಳಿದುಕೊಳ್ಳಲು ಸಾಧ್ಯ. ಜೊತೆಗೆ  ಇಂದಿನ ಹೊಸ ಪೀಳಿಗೆಗೆ  ಈ ಸಾಂಸ್ಕೃತಿಕ ವಿನಿಮಯವನ್ನು ತೋರಿಸಿ ಕೊಟ್ಟು ಅವರ ಮೂಲಕದ ಈ ಕೂಡುಬಾಳುವಿಕೆಯ ಪರಂಪರೆಯನ್ನು ಮುಂದುವರಿಸಬೇಕಾದ ಜಾವಾಬ್ದಾರಿ ನಮ್ಮ ಮೇಲಿದೆ. ಇಲ್ಲವಾದರೆ ಈಗಾಗಲೇ ಗಟ್ಟಿಗೊಳ್ಳುತ್ತಿರುವ ಅಪನಂಬಿಕೆಗಳು ಹಾಗೂ ಮನಸ್ಸುಗಳ ನಡುವಿನ ಕಂದಕ ಮತ್ತಷ್ಟು ವಿಸ್ತರಣೆಯಾಗಲು ಕಾರಣವಾಗುವುದರಲ್ಲಿ ಸಂಶಯವಿಲ್ಲ.

     

    ನಾವು ಅಜಿಲಮೊಗರು ದರ್ಗಾಕ್ಕೆ ಭೇಟಿ ಕೊಡುವ ರಸ್ತೆಯಲ್ಲಿ ಗಣೇಶ್ ಎಂಬ ಯುವಕ ಮಾತಿಗೆ ಸಿಕ್ಕರು. ಆಗಷ್ಟೇ ಅವರು ಅಜಿಲಮೊಗರು ದರ್ಗಾಕ್ಕೆ ಹೋಗಿ ಹರಕೆ ಸಲ್ಲಿಸಿ ಬಂದಿದ್ದರು. ಇಂತಹ ಸೌಹಾರ್ದತೆ ಮುಂದುವರಿಯಬೇಕೋ ಎಂದು ನಾವು ಪ್ರಶ್ನೆ ಮಾಡಿದಾಗ ಹೌದು ಖಂಡಿತ ಎಂದರು. ಆದರೂ ಅವರ ಸ್ವರದಲ್ಲಿ ಒಂದು ಸಣ್ಣ ಅಳುಕಿತ್ತು. ಈ ಅಳುಕು ಎರಡೂ ಧರ್ಮದ ಯುವಕರಲ್ಲಿದೆ. ಇದಕ್ಕೆ ಕಾರಣ ಏನು ಎಂಬುವುದು ಇಲ್ಲಿ ವಿವರಿಸುವ ಅಗತ್ಯವಿಲ್ಲ. ಈ ಅಳುಕನ್ನು ದೂರಮಾಡುವ ಕೆಲಸ ವರ್ತಮಾನದ ಅಗತ್ಯ ಎಂಬ ಸತ್ಯವನ್ನು ನಾವೆಲ್ಲಾ ಅರ್ಥಮಾಡಿಕೊಳ್ಳಬೇಕಾಗಿದೆ. 

    ಅಜಿಲಮೊಗರು ದರ್ಗಾ ಹಾಗೂ ಕಡೇ ಶಿವಾಲಯದ ದೇವಸ್ಥಾನದ ನಡುವೆ ನೇತ್ರಾವತಿ ನದಿ ಹರಿಯುತ್ತಿದೆ. ಸದ್ಯ ಜನರು ದೋಣಿ ಮೂಲಕ ನದಿ ದಾಟಿ ಎರಡು ಕ್ಷೇತ್ರಗಳಿಗೆ ಹೋಗುತ್ತಾರೆ. ಎರಡೂ ಕ್ಷೇತ್ರಗಳಿಗೆ ತೆರಳಲು ಅನುಕೂಲವಾಗಲಿ ಎಂದು ಸರ್ಕಾರ ಸೇತುವೆ ನಿರ್ಮಾಣಕ್ಕೂ ಮುಂದಾಗಿದೆ. ಇದನ್ನು ಸೌಹಾರ್ದ ಸೇತುವೆ ಎಂದು ಪ್ರಚಾರ ಮಾಡಲಾಗುತ್ತಿದೆ. ನಮಗೆ ಈ ಸೇತುವೆ ಕೇವಲ ಸೇತುವೆಯಾಗಿ ಕಾಣುತ್ತಿಲ್ಲ. ಬದಲಾಗಿ ಧರ್ಮವನ್ನು ಮೀರಿ ಜನರ ಮನಸ್ಸುಗಳನ್ನು ಬೆಸೆಯುವ ಸೇತುವೆ ಎಂಬ ರೂಪಕವಾಗಿ ಕಾಣಬೇಕು. 

    ಹೌದು,  ಕೇವಲ ನದಿ ದಾಟಲು ಸೇತುವೆ ನಿರ್ಮಾಣ ಆದರೆ ಸಾಲದು; ಈ ಸೇತುವೆ ಎರಡೂ ಧರ್ಮ  ಜನ ಸಂಸ್ಕೃತಿಗಳ ನಡುವಿನ ಭಾಂಧವ್ಯ ಬೆಸೆಯುವ ಸೇತುವೆಯಾಗಲಿ ಎಂಬುದು ಸೌಹಾರ್ದ ಬಯಸುವ ಎಲ್ಲ ಮನಸ್ಸುಗಳ ಹಾರೈಕೆಯಾಗಿದೆ.

     

    Tags:

    ದರ್ಗ

    ಸೂಫಿ

    ಉರುಸ್

    ಸೇತುವೆ

    ಸೌಹಾರ್ದ

    ಅಜಿಲಮೊಗರು

    ಇರ್ಷಾದ್ ಉಪ್ಪಿನಂಗಡಿ

    Please reload

    ಅಮ್ಮ : ವೈಕ್ಕಂ ಕಥೆ, ಸುನೈಫ್ ಅನುವಾದದಲ್ಲಿ....

    ದುಡಿಯುವ ಜನರ ಐಕ್ಯತೆಯೇ ಕೋಮುವಾದಕ್ಕೆ ಸೂಕ್ತ ಮದ್ದು : ಭಗತ್ ಸಿಂಗ್ ಲೇಖನದ ಅನುವಾದ

    ಚುನಾವಣೆ, ಅಭಿಪ್ರಾಯ ಉತ್ಪಾದನೆ ಮತ್ತು ಮಾರುಕಟ್ಟೆ : ಕನ್ಹಯ್ಯ ಕುಮಾರ್

    ಜನ್ಮದಿನ : ಒಂದು ವೈಕ್ಕಂ ಕಥೆ, ಸುನೈಫ್ ಅನುವಾದದಲ್ಲಿ

    ರಾಜಕೀಯ ನಿಲುವು ವ್ಯಕ್ತಪಡಿಸಿದ ಯುವತಿಗೆ ಜಾತಿನಿಂದನೆ; ಇದಕ್ಕೆ ಕೊನೆ ಇಲ್ಲವೆ?

    ಬಿಜೆಪಿ ಹೇಳುವ 'ಉದ್ದೇಶಪೂರ್ವಕ ಸುಳ್ಳು'ಗಳು

    ಮೂರು ಸಚ್ಚಿದಾನಂದನ್ ಪದ್ಯಗಳು; ಸುನೈಫ್ ಅನುವಾದದಲ್ಲಿ

    ಇಸ್ಲಾಂ : ಧರ್ಮದೊಳಗೆ ಸೈದ್ಧಾಂತಿಕ ಸಂಘರ್ಷ ನಡೆಯಬೇಕಿದೆ...

    ಕ್ರಾಂತದರ್ಶಿತ್ವ ಕೋಮು ಉದ್ವಿಗ್ನತೆಯ ಮನಸ್ಥಿತಿಗೆ ಮದ್ದಾಗಬಲ್ಲದು

    1/10
    Please reload

    ಮೂರು ಸಚ್ಚಿದಾನಂದನ್ ಪದ್ಯಗಳು; ಸುನೈಫ್ ಅನುವಾದದಲ್ಲಿ

    May 5, 2019

    ಇಸ್ಲಾಂ : ಧರ್ಮದೊಳಗೆ ಸೈದ್ಧಾಂತಿಕ ಸಂಘರ್ಷ ನಡೆಯಬೇಕಿದೆ...

    May 3, 2019

    ಕ್ರಾಂತದರ್ಶಿತ್ವ ಕೋಮು ಉದ್ವಿಗ್ನತೆಯ ಮನಸ್ಥಿತಿಗೆ ಮದ್ದಾಗಬಲ್ಲದು

    May 1, 2019

    ಅಮ್ಮ : ವೈಕ್ಕಂ ಕಥೆ, ಸುನೈಫ್ ಅನುವಾದದಲ್ಲಿ....

    May 1, 2019

    ದುಡಿಯುವ ಜನರ ಐಕ್ಯತೆಯೇ ಕೋಮುವಾದಕ್ಕೆ ಸೂಕ್ತ ಮದ್ದು : ಭಗತ್ ಸಿಂಗ್ ಲೇಖನದ ಅನುವಾದ

    May 1, 2019

    ಚುನಾವಣೆ, ಅಭಿಪ್ರಾಯ ಉತ್ಪಾದನೆ ಮತ್ತು ಮಾರುಕಟ್ಟೆ : ಕನ್ಹಯ್ಯ ಕುಮಾರ್

    March 27, 2019

    ಧರ್ಮ, ರಾಷ್ಟ್ರ ಮತ್ತು ಸಾಮಾಜಿಕ ಕ್ರಾಂತಿ ವಿಷಯಗಳಲ್ಲಿ ಭಗತ್ ಸಿಂಗ್ ಮೇಲೆ ಯಾರ ಚಿಂತನೆಗಳ ಪ್ರಭಾವವಿತ್ತು?

    March 22, 2019

    ಬಾಜಿ : ಆಂಟನ್ ಚೆಕೋವ್ ಕಥೆ, ಪುನೀತ್ ಅಪ್ಪು ಅನುವಾದದಲ್ಲಿ...

    March 22, 2019

    ಕ್ರಾಂತಿ, ಅಧಿಕಾರ ಮತ್ತು ಪ್ರಜಾಪ್ರಭುತ್ವ ಕುರಿತು ಭಗತ್ ಸಿಂಗ್ ಮೇಲೆ ಪ್ರಭಾವ ಬೀರಿದ ಚಿಂತನೆಗಳು ಯಾವುವು ಗೊತ್ತೆ?

    March 20, 2019

    ಅಸ್ಪೃಶ್ಯತೆಯ ಸಮಸ್ಯೆ: ಭಗತ್ ಸಿಂಗನ ‘ವಿದ್ರೋಹಿ’ ಬರಹ : ಭಾಗ ~ 2

    March 19, 2019

    Please reload

    Share