ಕನ್ನೆತನ ಪರೀಕ್ಷೆ ನಪಾಸಾದ ಹೆಂಡತಿಯನ್ನು ಬಿಟ್ಟು ಕಳಿಸಿದ ಭೂಪ
June 1, 2016
ಹೌದು. ನೀವು ಓದಿದ ಶಿರೋನಾಮೆ ಸರಿಯಾಗೇ ಇದೆ. ನಾವು 21ನೇ ಶತಮಾಣದಲ್ಲಿದ್ದೇವೆ. ನಾಗರಿಕರೆನ್ನಿಸಿಕೊಂಡಿದ್ದೇವೆ. ಆಧುನಿಕರಾಗಿದ್ದೇವೆ. ಆದರೂ ಈ ಶಿರೋನಾಮೆ ಓದುತ್ತಿದ್ದೇವೆ.

ಈ ಘಟನೆ ನಡೆದಿರೋದು ನಮ್ಮದೇ ದೇಶದ ಮಹಾರಾಷ್ಟ್ರ ರಾಜ್ಯದಲ್ಲಿ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮದುವೆಯಾದ 48 ಗಂಟೆಯೊಳಗೇ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಜೊತೆ ಸಂಬಂಧ ಕಡಿದುಕೊಂಡಿದ್ದಾನೆ ಮತ್ತು ಈ ವಿಚ್ಛೇದನಕ್ಕೆ ಪಂಚಾಯ್ತಿಯ ಸಮ್ಮತಿ ಮುದ್ರೆ ದೊರಕಿದೆ.
ಮೇ 22ರಂದು ನಾಸಿಕದ ಹಳ್ಳಿಯಲ್ಲಿ ಈ ಜೋಡಿಯ ಮದುವೆಯಾಗಿತ್ತು. ಹುಡುಗಿಯ ಕನ್ನೆತನದ ಬಗ್ಗೆ ಮದುಮಗನಿಗೆ ಅನುಮಾನವಿದ್ದ ಹಿನ್ನೆಲೆಯಲ್ಲಿ ಹಳ್ಳಿಯ ಪಂಚಾಯ್ತಿಯೇ ಆತನಿಗೆ ಬಿಳಿ ಬೆಡ್ ಶೀಟ್ ಕೊಟ್ಟು, ಮೊದಲ ರಾತ್ರಿಯ ಮರುಬೆಳಗ್ಗೆಯೇ ಮರಳಿಸುವಂತೆ ಹೇಳಿತ್ತು. ಅದರಂತೆ ಕಲೆ ಇಲ್ಲದ ಬೆಡ್ ಶೀಟ್ ಪಂಚಾಯ್ತಿಯ ಮುಂದೆ ಹಿಡಿದ ಗಂಡಸು ತನ್ನ ಹೆಂಡತಿ ಮದುವೆಗೆ ಮೊದಲೇ ಕನ್ನೆತನ ಕಳಕೊಂಡಿದ್ದಳು ಎಂದು ಆರೋಪಿಸಿ ಆಕೆಯಿಂದ ವಿಚ್ಛೇದನ ಬೇಕೆಂದು ಕೇಳಿದ. ಆತನ ಬೇಡಿಕೆ ಮನ್ನಿಸಿ ಪಂಚಾಯ್ತಿ ಅವರ ಮದುವೆಯನ್ನು ಅಸಿಂಧುಗೊಳಿಸಿತು!
ಈ ಹುಡುಗಿ ಪೊಲೀಸ್ ಕೆಲಸಕ್ಕೆ ಸೇರುವ ತಯಾರಿಯಲ್ಲಿದ್ದಳು. ಬಹಳ ಚಟುವಟಿಕೆಯ ತರುಣಿಯಾಗಿದ್ದವಳು. ಈಗ ಈಕೆಯ ಕುಟುಂಬ ಅನಾಗರಿಕವಾಗಿ ಆರೋಪ ಹೊರಿಸಿ ಮದುವೆ ಮುರಿದ ಗಂಡಸು ಹಾಗೂ ಆತನಿಗೆ ಬೆಂಬಲ ನೀಡಿದ ಪಂಚಾಯ್ತಿದಾರರ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡಲು ಮುಂದಾಗಿದ್ದಾರೆ.
May 1, 2019
March 22, 2019
March 19, 2019
