ಕಾರ್ ಓವರ್ ಟೇಕ್ ಮಾಡಿದ್ದಕ್ಕೆ ಗುಂಡು ಹಾರಿಸಿ ಕೊಲೆ
May 8, 2016
ಜೆಡಿಯುನ ಪ್ರಭಾವಿ ರಾಜಕಾರಣಿ, ಎಮ್ಮೆಲ್ಸಿ ಮನೋರಮಾ ದೇವಿಯ ಮಗನ ಕಾರ್ ಓವರ್ ಟೇಕ್ ಮಾಡಿದ್ದಕ್ಕೆ ಯುವಕನೊಬ್ಬ ಕೊಲೆಯಾಗಿ ಹೋಗಿದ್ದಾನೆ. ಈ ಘಟನೆ ನಡೆದಿದ್ದು ಮೇ 7ರಂದು.

ಬಿಹಾರದ ಉದ್ಯಮಿಯೊಬ್ಬರ ಮಗ ಸಚ್ ದೇವ್ ತನ್ನ ಗೆಳೆಯ ಆಯುಷ್ ಜೊತೆಗೆ ಗಯಾದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಈ ಸಂದರ್ಭ ಮನೋರಮಾ ದೇವಿಯವರ ಮಗ ರಾಕಿ ಯಾದವ್ ಕಾರನ್ನು ಓವರ್ ಟೇಕ್ ಮಾಡಿಕೊಂಡು ಮುಂದೆ ಹೋದರು. ಇದನ್ನು ಸಹಿಸದ ರಾಕಿ ಯಾದವ್, ವೇಗವಾಗಿ ಕಾರು ಚಲಾಯಿಸಿ ಅವರ ಕಾರನ್ನು ಅಡ್ಡಗಟ್ಟಿ ಜಗಳಕ್ಕೆ ನಿಂತರು. ಮಾತಿನ ಚಕಮಕಿ ನಡೆದು ಸಚ್ ದೇವ್ ಮೇಲೆ ಗುಂಡು ಹಾರಿಸಿ, ಸ್ಥಳದಿಂದ ಪಲಾಯನಗೈದರು ಎಂದು ಸಚ್ ದೇವ್ ಗೆಳೆಯ ಆಯುಷ್ ಪೊಲೀಸರಿಗೆ ತಿಳಿಸಿದ್ದಾರೆ.
ಗುಂಡೇಟು ತಿಂದ ಸಚ್ ದೇವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲೆಮರೆಸಿಕೊಂಡ ರಾಕಿ ಯಾದವ್ ಇನ್ನೂ ಪತ್ತೆಯಾಗಿಲ್ಲ. ಆತನ ತಂದೆ, ಬಿಹಾರದ ಪ್ರಭಾವಿ ಉದ್ಯಮಿಯೂ ಆಗಿರುವ ಬಿಂಡಿ ಯಾದವ್, ಇದು ತನ್ನ ಮಗನನ್ನು ಸಿಕ್ಕಿಹಾಕಿಸಲು ವಿರೋಧಿಗಳು ಹೂಡಿರುವ ತಂತ್ರ ಎಂದಿದ್ದಾರೆ. ಇದಕ್ಕೆ ಮನೋರಮಾ ಕೂಡ ದನಿಗೂಡಿಸಿದ್ದು, ಬಿಹಾರದ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ.
ಹಣ ಮತ್ತು ಅಧಿಕಾರದ ದರ್ಪ ಮನುಷ್ಯನನ್ನು ಮೃಗವಾಗಿಸುತ್ತದೆ ಅನ್ನೋದಕ್ಕೆ ಇಂಥ ಘಟನೆಗಳೇ ಸಾಕ್ಷಿ.
May 1, 2019
March 22, 2019
March 19, 2019
