ಮೋದಿ - ಅದಾನಿ ಅನೈತಿಕ ಸಂಬಂಧಕ್ಕೆ ಕೋಟ್ಯಂತರ ರುಪಾಯಿ ಸಾಲದ ಗಿಫ್ಟ್
May 6, 2016
ಗೌತಮ್ ಅದಾನಿ ಸೇರಿದಂತೆ ದೇಶದ ದೊಡ್ಡ ದೊಡ್ಡ ಕಂಪನಿಗಳ ಇನ್ನೂ 5 ಉದ್ಯಮಿಗಳು ಸಾವಿರಾರು ಕೋಟಿ ಸಾಲ ಮಾಡಿ, ಪಾವತಿಸದೆ ಉಂಡಾಡಿಕೊಂಡು ಇದ್ದಾರೆ. ಗೌತಮ್ ಅದಾನಿಯ ಕಂಪನಿ ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತ, ದೇಶದಲ್ಲಿ ಒಟ್ಟಾರೆ ರೈತರು ಮಾಡಿರುವ ಬೆಳೆ ಸಾಲದ ಮೊತ್ತಕ್ಕೆ ಸಮ!

ನಾವೆಲ್ಲ ಕೋಟ್ಯಂತರ ರೂಪಾಯಿ ಸಾಲ ಮಾಡಿ ಪಾವತಿಸದೆ ದೇಶ ತೊರೆದಿರುವ ವಿಜಯ್ ಮಲ್ಯ ಬಗ್ಗೆ ಚರ್ಚಿಸುವುದರಲ್ಲೇ ಮೈಮರೆತಿದ್ದೇವೆ. ಇತ್ತ ಗೌತಮ್ ಅದಾನಿ ಎಂಬಾತ ಮಲ್ಯರ ದುಪ್ಪಟ್ಟು ಸಾಲ ಮಾಡಿ ಪ್ರಧಾನಿ ಜೊತೆ ದೇಶವಿದೇಶ ಸುತ್ತುತ್ತ ತಲೆ ಎತ್ತಿಕೊಂಡು ಓಡಾಡುತ್ತಿದ್ದಾರೆ. ರಾಜ್ಯಸಭೆ ಸದಸ್ಯ ಪವನ್ ವರ್ಮ ನೀಡಿರುವ ಅಂಕಿ ಅಂಶಗಳ ಪ್ರಕಾರ ಅದಾನಿ ಗ್ರೂಪ್ ಸರ್ಕಾರಿ ಬ್ಯಾಂಕ್’ನಿಂದ ಮಾಡಿರುವ ಸಾಲದ ಮೊತ್ತ 72 ಸಾವಿರ ಕೋಟಿ ರುಪಾಯಿಗಳು!
ನಮಗೆ ಮಲ್ಯರ ರಂಗುರಂಗಿನ ಔಟ್ ಲುಕ್ ಹಾಗೂ ರಂಗೀಲಾ ಬದುಕಿನ ಬಗ್ಗೆ ಹೊಟ್ಟೆಕಿಚ್ಚು ಇದೆಯೇನೋ. ಅದಕ್ಕೇ ಸಾಲದ ಬಗ್ಗೆ ಪ್ರತಿಕ್ರಿಯಿಸುವಾಗ ಜಾಣತನ ತೋರಿ ಕೇವಲ ಮಲ್ಯ ವಿರುದ್ಧ ಕಿಡಿಕಾರುತ್ತಿದ್ದೇವೆ. ಗೌತಮ್ ಅದಾನಿ ಸೇರಿದಂತೆ ದೇಶದ ದೊಡ್ಡ ದೊಡ್ಡ ಕಂಪನಿಗಳ ಇನ್ನೂ 5 ಉದ್ಯಮಿಗಳು ಸಾವಿರಾರು ಕೋಟಿ ಸಾಲ ಮಾಡಿ, ಪಾವತಿಸದೆ ಉಂಡಾಡಿಕೊಂಡು ಇದ್ದಾರೆ. ಗೌತಮ್ ಅದಾನಿಯ ಕಂಪನಿ ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತ, ದೇಶದಲ್ಲಿ ಒಟ್ಟಾರೆ ರೈತರು ಮಾಡಿರುವ ಬೆಳೆ ಸಾಲದ ಮೊತ್ತಕ್ಕೆ ಸಮ! ಈ ರೈತರು ಮರುಪಾವತಿ ಮಾಡಲಾಗದೆ, ಬ್ಯಾಂಕ್’ನ ಉಪಟಳ (ಅವರ ಪಾಲಿನ ಕರ್ತವ್ಯ) ತಡೆಯಲಾಗದೆ ಆತ್ಮಹತ್ಯೆಗೆ ಮೊರೆ ಹೋಗ್ತಿರುವಾಗ, ಅತ್ತ ಅದಾನಿ ಮೋದಿ ಹೋದಲ್ಲೆಲ್ಲ ಹಿಂಬಾಲಿಸುತ್ತ, ಯೋಜನೆಗಳ ಮೇಲೆ ಯೋಜನೆ ಮಂಜೂರು ಮಾಡಿಸಿಕೊಳ್ತಾ ಭರ್ಜರಿ ಭೋಜನ ಮಾಡ್ತಿದ್ದಾರೆ. ಎಷ್ಟರಮಟ್ಟಿಗೆ ಅಂದರೆ, ಗುಜರಾತ್ ನಲ್ಲಿ ಹೈಕೋರ್ಟ್ ಆಕ್ಷೇಪಣೆಯ ನಡುವೆಯೂ ಕಂಪನಿಯ ಎಸ್ಇ ಜಡ್ ಗೆ ಅನುಮತಿ ನೀಡಲಾಗಿದೆ. ಮೋದಿಯವರ ಅದಾನಿಪ್ರೇಮ ಅಸಹ್ಯಕರ ಮಟ್ಟ ತಲುಪಿದ್ದು, ಪ್ರಧಾನಿ ಅದಾನಿ ಗ್ರೂಪ್ಸ್’ನ ನಿಷ್ಠ ಪಿ ಆರ್ ನಂತೆ ಕೆಲಸ ಮಾಡುತ್ತಿದ್ದಾರೆ ಅನ್ನುವ ಟೀಕೆಗಳು ಕೇಳಿಬರುತ್ತಿವೆ. ಈ ನಡುವೆ, ಕಳೆದ 2 – 3 ವರ್ಷಗಳಲ್ಲಿ ಅದಾನಿ ಗ್ರೂಪ್ಸ್ ಮೌಲ್ಯದಲ್ಲಿ 85%ರಷ್ಟು ಏರಿಕೆಯಾಗಿದೆ!

ಸರ್ಕಾರಿ ಬ್ಯಾಂಕ್ (ಪಿಎಸ್ ಯು)ಗಳ ಮೇಲೆ ಒತ್ತಡ ಹೇರಿ ಸಾಲ ಮರುಪಾವತಿ ಮಾಡದ ತಲೆಪ್ರತಿಷ್ಠೆಯ ಶ್ರೀಮಂತ ಉದ್ಯಮಿಗಳಿಗೆ ಅತಿ ಹೆಚ್ಚು ಸಾಲ ಕೊಡಿಸುವ ಪರಿಪಾಠ ಈ ಹಿಂದಿನಿಂದಲೂ ನಡೆದುಬಂದಿದೆ. ಪಿಎಸ್ ಯು ಬ್ಯಾಂಕ್ ಗಳಲ್ಲಿ ವಿವಿಧ ಕಾರ್ಪೋರೆಟ್ ಕಂಪನಿಗಳು ಒಟ್ಟಾರೆಯಾಗಿ 5 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ಪಡೆದಿವೆ. ಅದರಲ್ಲಿ ಸುಮಾರು 1.4 ಲಕ್ಷ ಕೋಟಿ ರುಪಾಯಿಯಷ್ಟು ಸಾಲವನ್ನು ಲ್ಯಾಂಕೊ, ಜಿವಿಕೆ, ಸುಜ್ಲೋನ್ ಎನರ್ಜಿ, ಹಿಂದೂಸ್ಥಾನ್ ಕನ್ಸ್ ಸ್ಟ್ರಕ್ಷನ್ಸ್ ಹಾಗೂ ಅದಾನಿ ಗ್ರೂಪ್’ಗಳು ಕಬಳಿಸಿವೆ. ಜನಸಾಮಾನ್ಯರು ಸಂಪತ್ತಿನ ಅಸಮಾನ ಹಂಚಿಕೆಯ ವಿರುದ್ಧ ಮಾತಾಡುವುದಕ್ಕೂ ಮೊದಲು ಸಾಲದ ಅಸಮಾನ ಹಂಚಿಕೆ ವಿರುದ್ಧ ದನಿ ಎತ್ತಬೇಕಾದ ದುಃಸ್ಥಿತಿಗೆ ಈ ರಾಜಕಾರಣಿಗಳು ತಳ್ಳಿದ್ದಾರೆ.
May 1, 2019
March 22, 2019
March 19, 2019
